ಎಷ್ಟೋ ದಿನ ಎಷ್ಟೋ ಕ್ಷಣ
ನೀ ನನಗೆ ಮಗುವಾದೆ
ನಾ ನಿನಗೆ ಮಗುವಾದೆ
ಎಷ್ಟೋ ಸಲ ಒಟ್ಟಿಗೆ ನಕ್ಕಿದ್ದೆವು
ಮರುಕ್ಷಣ ಅತ್ತಿದ್ದೆವು
ಒಂದೇ ತಟ್ಟೆಯ ಊಟ ಬಹಳ ರುಚಿಯಾಗಿತ್ತು
ನನ್ನ ಕೈ ತುತ್ತಿಗೆ ನಿನ್ನ ಮನ ಹಾತೊರೆಯುತಿತ್ತು
ಸ್ಪರ್ಶದಲ್ಲಿ ಎಂದೂ ಜೊತೆಗಿರುವೆವು
ಎಂಬ ಭಾವದ ತಂತಿ ಮೀಟುತಿತ್ತು
ಆದರೆ ಇಂದು
ಯಾರೋ ನಿನ್ನ ಬಂಧಿಸಿದಂತೆ
ನನ್ನಿಂದ ನಿನ್ನ ಕಿತ್ತುಕೊಂಡ ಅನುಭವ
ಮಾತಿನಲ್ಲಿ ನೈಜತೆ ಇಲ್ಲ , ಮೊದಲಿನ ಪುಳಕವಿಲ್ಲ
ಕೈ ಹಿಡಿದರು ಅದು ಬಿಗಿಯಿಲ್ಲ
ಉಸಿರಾಟದ ಏರಿಳಿತದಲ್ಲಿ ಅಮ್ಮನೆಂಬ ಉಲಿವಿಲ್ಲ
ನಿನ್ನ ಬಳಿಯಿಂದ ಹೊರಟಾಗಲೂ ಈ ಜೀವ
ಹಾತೊರೆಯುತ್ತಿತ್ತು ಹಿಂದಿರುಗಿ ನೋಡಬೇಕೇಂದು
ಆದರೆ ತಿರುಗಿ ನೋಡಲೇ ಇಲ್ಲ
ಪೂರ್ತಿಯಾಗಿ ನಿನ್ನ ಕಣ್ಣ್ತುಂಬಿಕೊಳ್ಳಲ್ಲೂ ಇಲ್ಲ
ಎಲ್ಲಿ ಈ ಭಾವಜೀವಿ ಭಾವುಕಳಾಗುವಳೆಂಬ ಭಯದಿ
ನನ್ನ ಬೆನ್ನ ಹಿಂದೆ ಆ ನಿನ್ನ ಮಿನುಗು ಕಣ್ಗಳು
ನನ್ನೇ ನೋಡುತಿರುವು ಕಾಣಿಸುತ್ತಿತ್ತು
ನನ್ನ ಹೃದಯ ಕನ್ನಡಿಯಲ್ಲಿ