ಅಸ್ಸಾಂ ಪಶ್ಚಿಮ ಬಂಗಾಳದಲ್ಲಿ ಮೆದುಳು ಜ್ವರಕ್ಕೆ ನೂರಕ್ಕಿಂತಲೂ ಅಧಿಕ ಮಕ್ಕಳು ಬಲಿ . ಎಂತಹ ಮನಕಲುಕುವ ವಿಷಯ . ಆದರೆ ಹೆಚ್ಚಿನ ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಲೇ ಇಲ್ಲ. ಆದರೆ ಕ್ರೂರ ಮೆದುಳು ಜ್ವರಕ್ಕೆ ಬಲಿಯಾದದ್ದು ಇನ್ನು ಮೆದುಳೆಂದರೇನು ಅದರ ಪ್ರಾಮುಖ್ಯತೆ ನಮ್ಮ ಶರೀರದಲ್ಲಿ ಎಂದು ತಿಳಿಯದ ಮುಗ್ದ ಮಕ್ಕಳು.
ಮೆದುಳು ಜ್ವರವು ಗಾಳಿ ನೀರು ಧೂಳು ಮತ್ತು ನೀರಿನಲ್ಲಿರುವ ಅಪಾಯಕಾರಿ ವೈರಸ್ ನಮ್ಮ ದೇಹ ಪ್ರವೇಶಿಸಿ ಮೆದುಳು ತಲುಪಿ ನರವ್ಯೂಹಗಳು ನಿಸ್ತೆಜಗೊಳ್ಳುವಗ ಬರುವಜ್ವರ ಪಶ್ಚಿಮ ಬಂಗಲದಲ್ಲಿ ಮೆದುಳು ಜ್ವರದಿಂದ ಬದುಕಿ ಬಂದಿರುವ ಮಕ್ಕಳಿಗೆ ಔಷಧದ ಜೊತೆಗೆ ಪ್ರೀತಿಯ ಮಾತುಗಳು ಒಳ್ಳೆಯ ಧೈರ್ಯದ ಹಾರೈಕೆಗಳನ್ನು ಬಯಸಿ ಉಣಿಸಿದರೆ ಮಕ್ಕಳು ಬೇಗನೆ ಗುಣಮುಖರಾಗುತ್ತಾರೆ . ಜ್ವರವನ್ನು ಮೊದಲ ಹಂತದಲ್ಲಿ ಗುರುತಿಸುವುದು ಕಷ್ಟ . ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಜ್ವರ ಬೇಗ ತಗುಲುತ್ತದೆ .
ಹೌದು ಇಂತಹ ಮಹಾ ಮಾರಿ ಜ್ವರಕ್ಕೆ ತುತ್ತಾದವರಿಗೆ ಮಾತ್ರ ಗೊತ್ತಿರುತದೆ ಅದರ ನೋವೇನೆಂದು . ಒಂದೂವರೆ ವರ್ಷಗಳ ಹಿಂದೆ ಈ ರೋಗದ ಅನುಭವ ಪಡೆದವಳು ನಾನು . ಹೆರಿಗೆಯಾಗಿ ಆರು ತಿಂಗಳು ಪೂರ್ತಿ ಆಗಿರಲಿಲ್ಲ .ವೀಪರೀತ ಜ್ವರ ಸಹಿಸಲಾರದ ಕಣ್ಣು ಬಿಡಲು ಸಾದ್ಯವಾಗದ ತಲೆಯೊಳಗಿನ ನೋವು ಚುಚ್ಚು ಮದ್ದುಗಳು ಔಷಧಿಗಳು , ಲಂಬರ್ ಪಂಚರ್ ಟ್ರೀಟ್ಮೆಂಟ್ , ಐ ಸಿ ಯು ನ ಆ ವಾತಾವರಣ , ಹಗಲೋ ರಾತ್ರಿಯೋ ಎಂದು ತಿಳಿಯಲಾರದ ಮನಸ್ಥಿತಿ .ಯಾವುದನ್ನ ನೆನಪಿಡಲು ಶಕ್ತವಾಗಿರದ ಮೆದುಳು ಏನು ಮಾತನಾಡುತ್ತೆವೆ ಏನು ನಿರ್ಧಾರ ತೆಗೆದುಕೊಳ್ಲುತ್ತೆವೆ ಎಂಬ ಪರಿಜ್ಞಾನವೇ ನಮಗಿರುವುದಿಲ್ಲ .ನಮ್ಮ ಬಟ್ಟೆ ಹೇಗಿದೆ , ನಮಗೆ ಮಲ ಮೂತ್ರ ಬರುತ್ತದೆ ಎಂದು ಹೇಳುವ ಸ್ಥಿತಿಯಲ್ಲೂ ನಾವಿರುವುದಿಲ್ಲ .
ಆಸ್ಪತ್ರೆಯಿಂದ ಮನೆಗೆ ಬಂದರು ಭ್ರಮೆಯಲ್ಲಿ ಇರುವಂತೆ ಅನಿಸುತ್ತದೆ .ಯಾರೊಂದಿಗಾದರೂ ಮಾತಾಡಿದ್ದರು ಸ್ವಲ್ಪ ಸಮಯದ ಬಳಿಕ ನಾವು ಅವರೊಂದಿಗೆ ಮಾತಾಡಿದ್ದೇವೋ ಇಲ್ಲವೋ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯತೆ .ಪೂರ್ತಿಯಾಗಿ ಗೊಂದಲಮಯವಾದ ಜೀವನ .ಸತ್ಯವನ್ನು ಒಪ್ಪಿಕೊಳ್ಳುವ ಅರ್ಥೈಸಿಕೊಳ್ಳುವ ಮನಸ್ಸು ನಮ್ಮದಾಗಿರುವುದಿಲ್ಲ . ನಮ್ಮ ದೇಹ ಮನಸ್ಸು ನಮ್ಮ ಹಿಡಿತದಲ್ಲಿ ಇರುವುದಿಲ್ಲ .
ಈ ಭೀಕರ ಜ್ವರದಿಂದ ಹೊರ ಬರಲು ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು .ನನ್ನ ಮಗಳಿಗೆ ಆರು ತಿಂಗಳು ಆಗಿರಲಿಲ್ಲ . ಆಕೆಯೆ ಆಟ ಕುಳಿತುಕೊಳ್ಳುವ ಭಂಗಿ ಯಾವುದು ನೋಡಿದ್ದು ನನಗೆ ನೆನಪು ಬರುತ್ತ್ತಿಲ್ಲ . ಯಾರು ಎಷ್ಟೇ ನೆನಪು ಮಾಡಿಸಿದರು ನೆನಪಾಗುತ್ತಿಲ್ಲ .
ಆ ಸಮಯದಲ್ಲಿ ನನಗೇನು ಆಗುತ್ತಿತ್ತು ಎಂದು ನನಗೆ ತಿಳಿಯುತ್ತಿರಲಿಲ್ಲ ಹಠ ಸಿಟ್ಟು ಮೊಂಡುತನ ಭಾವುಕತೆ ಅಲ್ಪ ಸ್ವಲ್ಪ ನೆನಪುಗಳು ಯಾವ ವಸ್ತು ಎಲ್ಲಿ ಇಟ್ಟಿದ್ದೇವೆ ಎಂದು ನೆನಪಿಲ್ಲದ ಸ್ಥಿತಿ ಈ ಸ್ಥಿತಿಯನ್ನು ನೋಡಿ ನಗುವ ಜನ ಪ್ರೀತಿ ತೋರುವ ಬದಲು ದೂರವಿಟ್ಟ ಜನ ಎಲ್ಲವು ಜೀವನದಲ್ಲಿ ನಡೆದು ಹೋಯಿತು .ಆವರಿಸಿಕೊಂಡ ಕೀಳರಿಮೆಯಿಂದ ಹೊರ ಬರಲು ತುಂಬ ದಿನಗಳೇ ಬೇಕಾಯಿತು ಮನಸು ತುಂಬ ಸೂಕ್ಷ್ಮವಾಯಿತು . ಎರಡು ವರುಷ ತುಂಬಿದ ಮಗಳು ನನ್ನೊಡನೆ ಇರಲಾರಂಬಿಸಿದ ಮೇಲೆ ಜೀವನದಲ್ಲಿ ಚೈತನ್ಯ ಬಂತು
,ಅಸ್ಸಾಂನಲ್ಲಾದ ಮಕ್ಕಳ ಸಾವನ್ನು ಪೇಪರ್ನಲ್ಲಿ ಓದಿದಾಗ ಕಣ್ಣು ಒದ್ದೆಯಾಗುತಿತ್ತು . ಇಪ್ಪತ್ತ್ತೆಳು ವರ್ಷದ ನನಗೆ ನೋವು ಸಹಿಸಲಾರದೆ ಒದ್ದಾಡುತ್ತಿದೆ ಕಿರುಚಾಡುತ್ತಿದ್ದೆ .ಇನ್ನು ಈ ಮಕ್ಕಳ ಸ್ಥಿತಿ ಹೇಗಿದ್ದಿರಬಹುದು ಎಂಬುದನ್ನು ನೆನೆಸಲು ಆಗುತ್ತಿಲ್ಲ . ಹೊರ ಶರೀರಕ್ಕೆ ಆದ ಗಾಯವನ್ನು ಎಲ್ಲರು ಗಮನಿಸುತ್ತಾರೆ ಆದರೆ ಸೂಕ್ಷ್ಮವಾದ ಮೆದುಳಿಗೆ ಆದ ನೋವನ್ನು ಅನುಭವಿಸದರೆ ಮಾತ್ರ ತಿಳಿಯುವುದು .ಈಗಲೂ ಒಂದೊಂದು ಸಾರಿ ತೊದಲುವ ನನ್ನ ಮಾತುಗಳು ಯಾರಾದರೂ ಎದುರಿಗೆ ಪರಿಚಯವಿರುವ ವ್ಯಕ್ತಿ ಬಂದು ಮಾತಾಡಿಸಿದರು ಗುರುತು ಹಿಡಿಯಲಾರದೆ ಒದ್ದಾಡುವ ನನ್ನ ಸ್ಥಿತಿಯನ್ನು ಕಂಡು ನನಗೆ ಬೇಜಾರಾಗುತ್ತದೆ .
ಅಸ್ಸಾಂನಲ್ಲಿ ಪಶ್ಚಿಮ ಬಂಗಲದಲ್ಲಿ ಮೆದುಳು ಜ್ವರದಿಂದ ಬದುಕಿ ಬಂದಿರುವ ಮಕ್ಕಳಿಗೆ ಔಷಧದ ಜೊತೆಗೆ ಪ್ರೀತಿಯ ಮಾತುಗಳು ಒಳ್ಳೆಯ ಧೈರ್ಯದ ಹಾರೈಕೆಗಳನ್ನು ಬಯಸಿ ಉಣಿಸಿದರೆ ಮಕ್ಕಳು ಬೇಗನೆ ಗುಣಮುಖರಾಗುತ್ತಾರೆ