Sunday, 2 February 2014

ಅಂಬಿಗನ ನೆನಪೆಲ್ಲಿ ?

                                           ನಾನೊಂದು ಮುದಿ ಜೀವ 
ಎಲ್ಲರಿದ್ದು ಎಲ್ಲವಿದ್ದು ನಾನಿಂದು ಇಲ್ಲಿರುವೆ
ಇಲ್ಲಿರುವವರಲ್ಲಿ ಎನ್ನ ಮಗನನ್ನು ಹುಡುಕುತ್ತಿರುವೆ
ಆದರೆ ಎನ್ನೆದೆಯ ನೋವು ಮರೆಯಲು ಸಾಧ್ಯವೇ?

ನೀನಂದು ಎಳೆಯ ಮಗು
ಎನ್ನೆದೆಗೆ ಒದ್ದಾಗ ಪುಳಕಗೊಂಡೆ
ಪುಟ್ಟ ಹೆಜ್ಜೆಯಿಟ್ಟು ಎಡವಿದಾಗ
ನಾ ನಿನಗೆ ಊರುಗೋಲಾದೆ

ನಿನ್ನ ಆ ಮುಗ್ಧ ನಗು
ಮರೆಸುತ್ತಿತ್ತು ನನ್ನೆಲ್ಲಾ ದುಃಖ
ಆದರೆ, ನೀನಿಂದು
ಯಾಕೆ ಹೀಗಾದೆ?

ನಿನಗೆ ಕೊಡಿಸಿದ ವಿದ್ಯೆ,ಹಣ
ನಿನ್ನನೀ ರೀತಿ ಮಾಡಿಸುತಿದೆಯೇ ?
ನಾನಿಂದು ನಿನಗೆ ಬೇಡವಾದೆನೆ ?
ನಿನಗೆ ಈ ಜೀವ ಭಾರವಾಯಿತೇ ?

ಎನಗೆ ನೀಡುವ ತುತ್ತು
ಈ ಆಶ್ರಮಕ್ಕೆ ನೀಡುವ ಹಣಕ್ಕಿಂತ ಹೆಚ್ಚೇ?
ನದಿ ದಾಟಿದ ಮೇಲೆ ಅಂಬಿಗನ ನೆನಪೆಲ್ಲಿ
ಎಂಬ ಮಾತು ನನ್ನ ಬಾಳಲ್ಲಿ ನಿಜವೇ?

Tuesday, 28 January 2014

ಗೆಳೆಯನಿಗೆ


ಮನದ  ಕೊಳಕೊಂದು  ಕಲ್ಲು ಬಿತ್ತು
ಶುಭ್ರ ಮನದಲ್ಲಿ ನೋವಿನ ಅಲೆಯೇಲಿ ಬಂತು
ಕಲ್ಲು ಬಿಸಾಕಿದ ನಿನಗೆ ತಿಳಿದಿಲ್ಲ
ಅದು ನನ್ನೆದೆಗೆ ಎಷ್ಟು ನಾಟಿದೆಯೆಂದು
ಮೊನ್ನೆ ತನಕ ಎಲ್ಲವು ಸರಿ ಇತ್ತು
ನಿನ್ನ ಮುಖ ನನ್ನೆದೆಯ ಕೊಳದಲ್ಲಿ ಹೊಳೆಯುತಿತ್ತು
ಇಂದು ನೋವಿನಲೆಯಲ್ಲಿ ಚದುರುತಿದೆ
ಮುಖದ ಸ್ಪಷ್ಟತೆ ಮಾಯವಾಗುತ್ತಿದೆ
ಎಷ್ಟೋ ಬಾರಿ ಕಿರುಚಿ ಕೇಳಬೇಕೆನಿಸುತ್ತದೆ
ತಣ್ಣಗಿದ ಮನವ ಯಾಕೆ ಕಲಕಿದೆಯೆಂದು
ಆದರೆ ಶಬ್ದ ಬರುತ್ತಿಲ್ಲ
ಈಗ ಮೊದಲಿನ ಪ್ರೀತಿಯು ಉಳಿದಿಲ್ಲ
ನೀ ದೂರ ಮಾಡಿದ ಕಾರಣವು ತಿಳಿದಿಲ್ಲ
ಮುಂದೆ ಅದನ್ನು ಕೇಳುವ ತಾಳ್ಮೆಯು ನನಗಿಲ್ಲ

Thursday, 23 January 2014

ಹನಿ ಕವನ

                                                        ಹಾಡು 
ನಾನು ಹಾಡಿದೆ ಒಂದು ಹಾಡು
ಅದನ್ನು ಕೇಳಿದ ನಮ್ಮ ಮನೆಯ ಆಡು
ನಾಡು ಬಿಟ್ಟು ಸೇರಿತು ಕಾಡು







ದ(ಧ)ನ
ನನ್ನಲ್ಲಿ ಇದ್ದರೆ ಕೈ ಹಣ
ನನ್ನ ಹಿಂದೆ ಸಾವಿರಾರು ಜನ
ನನ್ನಲ್ಲಿ ಖಾಲಿಯಾದರೆ ಜನ
ನಾ ಬರಿಯ ಗೊಡ್ಡು ದನ

ಒಡವೆ
ನನ್ನವಳು  ಕೇಳಿದಳು        
ನನ್ನ ಬಳಿ ಒಡವೆ
ಒಡವೆ ತಂದ ಮರುಕ್ಷಣದಿಂದ
ಅವಳಿಗಿಲ್ಲ ನನ್ನ ಬಗೆಗೆ ಗೊಡವೆ  

ಜೊಲ್ಲು
ಓ ಗೆಳೆಯ
ನೀ ಸುರಿಸ ಬೇಡ ಹುಡುಗಿಯರ
 ನೋಡಿ   ಜೊಲ್ಲು
ಅವರ ಕೈಗೆ ಬಂದೀತು
                                                      ಪೊರಕೆ ಜಲ್ಲಿ ಕಲ್ಲು

ನ(ನಾ)ಗರೀಕರಣ
ಇಂದು  ಎಲ್ಲಾ ಕಡೆಯು
ಕಾಣುತ್ತಿದೆ ನಗರೀಕರಣ
ಅದರೆಡೆಯಲ್ಲಿ ಮರೆಯಾಗುತ್ತಿದೆ
ನಾಗರೀಕರಣ


      ಗೋಲ
       ಹದಿ ಹರೆಯದಲ್ಲಿ ಮನಸ್ಸು
        ಬಹಳ ಚಂಚಲ
        ಹತೋಟಿ ತಪ್ಪಿದರೆ
        ಜೀವನ ಬರಿಯ ಗೋಲ