ಹಾಡು
ದ(ಧ)ನ
ನನ್ನಲ್ಲಿ ಇದ್ದರೆ ಕೈ ಹಣ
ನನ್ನ ಹಿಂದೆ ಸಾವಿರಾರು ಜನ
ನನ್ನಲ್ಲಿ ಖಾಲಿಯಾದರೆ ಜನ ನಾ ಬರಿಯ ಗೊಡ್ಡು ದನ
ಒಡವೆ
ನನ್ನವಳು ಕೇಳಿದಳು
ನನ್ನ ಬಳಿ ಒಡವೆ
ಒಡವೆ ತಂದ ಮರುಕ್ಷಣದಿಂದ
ಅವಳಿಗಿಲ್ಲ ನನ್ನ ಬಗೆಗೆ ಗೊಡವೆ
ಜೊಲ್ಲು
ಓ ಗೆಳೆಯ
ನೀ ಸುರಿಸ ಬೇಡ ಹುಡುಗಿಯರ
ನೋಡಿ ಜೊಲ್ಲು
ಅವರ ಕೈಗೆ ಬಂದೀತು
ಪೊರಕೆ ಜಲ್ಲಿ ಕಲ್ಲು
ನ(ನಾ)ಗರೀಕರಣ ಇಂದು ಎಲ್ಲಾ ಕಡೆಯು
ಕಾಣುತ್ತಿದೆ ನಗರೀಕರಣ
ಅದರೆಡೆಯಲ್ಲಿ ಮರೆಯಾಗುತ್ತಿದೆ
ನಾಗರೀಕರಣ
ಗೋಲ
ಹದಿ ಹರೆಯದಲ್ಲಿ ಮನಸ್ಸು
ಬಹಳ ಚಂಚಲ
ಹತೋಟಿ ತಪ್ಪಿದರೆ
ಜೀವನ ಬರಿಯ ಗೋಲ



No comments:
Post a Comment