Wednesday, 25 September 2019

ಭಾವನೆ

ಹೇಳಲಾರದ ಭಾವ ಎದೆಯೊಳಗೆ
ಪ್ರತಿ ಕ್ಷಣವೂ ನಿನಗಾಗಿ ಹುಡುಕಾಟ
ನನ್ನ ಪ್ರತಿ ಉಸಿರು ಕಾಯುತಿದೆ ನಿನ್ನ ಬರುವಿಕೆಗಾಗಿ
ಒಮ್ಮೆ ಬಂದು ಬಿಡು
ಬೇರೇನೂ ಬೇಕಿಲ್ಲ ಈ ಜೀವಕೆ
ಒಮ್ಮೆ ನಿನ್ನ ತೋಳ ತೆಕ್ಕೆಯಲ್ಲಿ ಬಂಧಿಯಾಗಬೇಕು
ಕಡಲ ತಡಿಯಲ್ಲಿ ನಿನ್ನ ಮಡಿಲಲ್ಲಿ ಮಲಗಿ
ತೆರೆಯ ಏಣಿಸಬೇಕು
ನಿನ್ನ ಹೃದಯ ಬಡಿತದಲ್ಲಿ ನನ್ನ ಹೆಸರ ಕೇಳಬೇಕು
ಒಮ್ಮೆ ಬಂದು ಬಿಡು
ನನ್ನ ಬಳಿಗೆ
ಪ್ರೀತಿಯಿಂದ ಅಪ್ಪಿ ತಲೆಯ ನೇವರಿಸಿ
ನನ್ನ ಹಣೆಯನೊಮ್ಮೆ ಚುಂಬಿಸಿ ಬಿಡು
ಒಮ್ಮೆ ಬಂದು ಬಿಡು
 ನನ್ನ ಬಳಿಗೆ

No comments:

Post a Comment