Sunday, 22 December 2013

ರಂಗೋಲಿ

ಬಾನಂಗಳದಲಿ  ಚುಕ್ಕಿಯಿಡದೆ
ಬರೆದ ರಂಗೋಲಿ
ಒಂದೊಂದು ಒಂದಕ್ಕಿಂತ  ಭಿನ್ನ

ಬಿಳಿ ಬಿಳಿಮಿಶ್ರಿತ ನೀಲಿ
ಎಷ್ಟೊಂದು ಸಹಜ ಬಣ್ಣ
ನಿನ್ನಲ್ಲಿ ಸೂರೆಯಾಯಿತು ಎನ್ನ ಮನ

ನಿಂತಲ್ಲಿ  ನಿಲ್ಲದ ನಿನ್ನ ಪಯಣ
ಎನ್ನ ಜೀವನವ ಅಣಕಿಸುತ್ತಿದೆ
ಯಾವುದೋ ಸಂದೇಶವ ಸಾರುತ್ತಿದೆ

 
ನೀ ದಣಿದು ತಣಿದಾಗ
ಬರುವ ಬೆವರ ಹನಿಗೆ
ತಂಪಾಯಿತು ಇಡೀ ಧರಣಿ


ಮರುಕ್ಷಣವೇ , ಬಾನಂಗಳ
ಶುಭ್ರ ನೀಲಿ ,ಇಡೀ ಖಾಲಿ ಖಾಲಿ
ಅಂಗಳದಂಚಲ್ಲಿ ಮತ್ತೆ ಕಾಣುತ್ತಿದೆ ರಂಗೋಲಿ

ಜೀವನವೆಂದರೆ ಹೀಗೆ ,
  ಕಷ್ಟ ಬರುವುದು  ತೇಲಿ ತೇಲಿ
ಬೆನ್ನಲ್ಲೇ , ಸುಖ ಬರುವುದು  ಮುಗುಳ್ನಗೆಯ ಬೀರಿ 

8 comments:

  1. Hey chennagide.
    Swetha

    ReplyDelete
  2. Your creativity and flow of thoughts are superb. Read a little and enjoyed the same. Pls keep up the good work.

    ReplyDelete
  3. Kashta baruvudu teli teli... bennalle sukha baruvudy mugulnageya beeri...

    ReplyDelete