ಬಾನಂಗಳದಲಿ ಚುಕ್ಕಿಯಿಡದೆ ಬರೆದ ರಂಗೋಲಿ
ಒಂದೊಂದು ಒಂದಕ್ಕಿಂತ ಭಿನ್ನ
ಬಿಳಿ ಬಿಳಿಮಿಶ್ರಿತ ನೀಲಿ
ಎಷ್ಟೊಂದು ಸಹಜ ಬಣ್ಣ
ನಿನ್ನಲ್ಲಿ ಸೂರೆಯಾಯಿತು ಎನ್ನ ಮನ
ನಿಂತಲ್ಲಿ ನಿಲ್ಲದ ನಿನ್ನ ಪಯಣ
ಎನ್ನ ಜೀವನವ ಅಣಕಿಸುತ್ತಿದೆ
ಯಾವುದೋ ಸಂದೇಶವ ಸಾರುತ್ತಿದೆ
ನೀ ದಣಿದು ತಣಿದಾಗ
ಬರುವ ಬೆವರ ಹನಿಗೆ
ತಂಪಾಯಿತು ಇಡೀ ಧರಣಿ
ಮರುಕ್ಷಣವೇ , ಬಾನಂಗಳ
ಶುಭ್ರ ನೀಲಿ ,ಇಡೀ ಖಾಲಿ ಖಾಲಿ
ಅಂಗಳದಂಚಲ್ಲಿ ಮತ್ತೆ ಕಾಣುತ್ತಿದೆ ರಂಗೋಲಿ
ಜೀವನವೆಂದರೆ ಹೀಗೆ ,
ಕಷ್ಟ ಬರುವುದು ತೇಲಿ ತೇಲಿ
ಬೆನ್ನಲ್ಲೇ , ಸುಖ ಬರುವುದು ಮುಗುಳ್ನಗೆಯ ಬೀರಿ
Hey chennagide.
ReplyDeleteSwetha
thank u
ReplyDeleteGood re
ReplyDeletethank you
ReplyDeleteYour creativity and flow of thoughts are superb. Read a little and enjoyed the same. Pls keep up the good work.
ReplyDeleteSimply superb
ReplyDeleteKashta baruvudu teli teli... bennalle sukha baruvudy mugulnageya beeri...
ReplyDeleteThank u
ReplyDelete