Wednesday, 25 December 2013

ಬಾಲಮಂಗಳ

  ಬಾಲ್ಯದ ದಿನಗಳಲ್ಲಿ  ನನ್ನ ನೆಚ್ಚಿನ  ಸಂಗಾತಿಯೆಂದರೆ ಬಾಲಮಂಗಳ . ಈಗ ನಾನು ಯಾವ   ರೀತಿ  ಮೊಬೈಲಿಗೆ  ಅಂಟಿಕೊಂಡಿರುತೇನೋ ಅದೇ ರೀತಿ ಬಾಲಮಂಗಳಕ್ಕೆ ಅಂಟಿಕೊಂಡಿರುತಿದ್ದೆ . ಅದರಲ್ಲಿ ಬರುವ ಕಥೆಗಳನ್ನು ಓದುತ್ತ ಕುಳಿತರೆ ಊಟ ನಿದ್ದೆಯನ್ನು ಮರೆಯುತ್ತಿದ್ದೆ .

 ನನ್ನ ಮನೆಗೆ ಬಾಲಮಂಗಳ ತರುತ್ತಿರಲ್ಲಿಲ್ಲ ಆದರೆ ನನ್ನ ಚಿಕ್ಕಪ್ಪನ ನೆರೆ ಮನೆಗೆ   ತರುತಿದ್ದರು . ಬಾಲಮಂಗಳ ಓದುವ ಆಸೆಗೆ ನಾ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದೆ. ಎಲ್ಲ ಹಳೆಯ ಹೊಸ ಸಂಚಿಕೆಗಳನ್ನು ಒಟ್ಟಿಗೆ ಓದುತ್ತಿದ್ದೆ . 
 ಕೆಲವೊಂದು ಸಂಚಿಕೆಗಳನ್ನು ನನ್ನ ಮನೆಗೆ ಎತ್ತಿಕೊಂಡು ಬಂದು ಪಾಠ ಪುಸ್ತಕದ ನಡುವೆ ಇಟ್ಟು ಓದಿ ಅಪ್ಪನೆದುರು ಪಾಠ ಓದುವಂತೆ ನಟಿಸುತ್ತಿದ್ದೆ .

ಬಾಲಮಂಗಳದೊಂದಿಗೆ ,ಬಾಲಮಂಗಳ ಚಿತ್ರಕಥೆಯೂ ನನ್ನ ಪ್ರೀತಿಯ ಪುಸ್ತಕ. ಒಂದು ದಿನ ತರಗತಿಯಲ್ಲಿ ಬಾಲಮಂಗಳ ಓದಿ, ಟೀಚರ್  ಕೈಗೆ ಸಿಕ್ಕಿ ಹೊಡೆತವನ್ನು ತಿಂದಿದ್ದೆ . ನಾನಿಂದು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಒಂದು ರೀತಿಯಲ್ಲಿ ಬಾಲಮಂಗಳ ಕಾರಣ .

   ಬಾಲಮಂಗಳದಲ್ಲಿ ಬರುತ್ತಿದ್ದ ಡಿಂಗ ಮತ್ತು  ಶಕ್ತಿ ಮದ್ದು ನನ್ನ ಪ್ರೀತಿಯ ಕಥೆಗಳು .  ನಾನು ಅಣ್ಣ ತಂಟೆ ಮಾಡಿಕೊಂಡು ಅಣ್ಣ  ಹೊಡೆದಾಗ ನಾನು ಜೋರಾಗಿ "ಡಿಂಗ ಕಾಪಾಡು"ಎಂದು ಕಿರುಚುತಿದ್ದೆ.  ಡಿಂಗ ಬರುತ್ತಿರಲಿಲ್ಲ ಆದರೆ ಅಮ್ಮ ಬಂದು ನನಗು ಅಣ್ಣನಿಗೂ ಬೆತ್ತದ ರುಚಿ ತೋರಿಸುತ್ತಿದ್ದರು.


   ಈಗ ನನಗೆ ಬಾಲಮಂಗಳದ ಬೆಲೆ  ಗೊತ್ತಿಲ್ಲ,  ಆಗ ನಾನು ನಾಲ್ಕು ,ಐದು ರೂಪಾಯಿಗೆ ಬಾಲಮಂಗಳ ಸಿಗುತ್ತಿತ್ತು. ಇಂದಿನ ಎಷ್ಟು ಜನ ಮಕ್ಕಳು ಬಾಲಮಂಗಳ ಓದುತ್ತಾರೆಂದು ತಿಳಿದಿಲ್ಲ ,ಬಾಲಮಂಗಳದ ಜಾಗವನ್ನು ಕಾರ್ಟೂನ್ ನೆಟ್ವರ್ಕ್ ,ಪೋಗೊ ಮುಂತಾದ ಚಾನೆಲ್ ಗಳು  ನಿಧಾನವಾಗಿ ಆಕ್ರಮಿಸಿಕೊಂಡಿವೆ .

ಅದೇನೆ ಆಗಿರಲಿ ಬಾಲಮಂಗಳ ನನ್ನ ಸಮಕಾಲೀನ ಗೆಳೆಯ ಗೆಳತಿಯರಿಗೆ ಪ್ರೀತಿಯ  ಪುಸ್ತಕವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ . ನೀವು ಬಾಲಮಂಗಳ ಡಿಂಗ ,ಲಂಬೋದರನ ಅಭಿಮಾನಿಗಳಾಗಿದ್ದರೆ   ಅಭಿಪ್ರಾಯ ತಿಳಿಸಿ .

5 comments:

  1. What u have told was absolutely right chetana........ I too fond of reading these books...... Our childhood went by reading these books....Along with these books we too used to read Chandamama, Balamitra... The young and new generation not havinng any idea of these books and what these books containing. Hope latleast in few homes it will remain but in our heart it will remain forever

    Shiv

    ReplyDelete
  2. yeah u r right,,,,thanks for u r comments...i wl take this as a token of appreciation

    ReplyDelete
  3. Hi Chethana,

    Nice article. I was a die hard fan of Balamangala. I have still collection of all the copies from 1988 to 2005. Whenever I read old copies during my free time, it reminds me my childhood days. Dinga, Keraga, Karingada, Pingala, Fakru, Chenchu, Lambodara.. ever green characters...

    - Harsha

    ReplyDelete
    Replies
    1. Hi Harsha,

      Very nice to know you have all the collections.
      Will you be open for creating a comic book out of Dinga collections?
      Let me know.

      Thanks
      Kumar

      Delete
    2. If interested get in touch @ kums78@gmail.com

      Delete